ಪುಟ್ಟ ಮನಸಿನ ಉಗ್ರಾಣದಲ್ಲೇಕೊ
ಕೂಡಿಟ್ಟ ನೆನಪುಗಳ ಕಲರವ.
ಸಮಯವೇ ಸಂಯಮದ ಪಾಠ ಹೇಳುತಾ
ಮನೆಗೆಲಸವನ್ನಾಗಿ ನೀಡಿದೆ ಮೌನವ.
ಮೌನವು ಮನದಟ್ಟಾಗಿ,
ಮಾತುಗಳೇ ಮರೆತುಹೋಗಿ,
ವ್ಯಸನ ಮಸಣಗಳ ಸಲುಗೆ ಅತಿಯಾಗಿ,
ನಂಬಿಕೆಯ ಮಹಲು ಮುರಿದು,
ತಾಳ್ಮೆಯ ತಾರಸಿ ಹರಿದು,
ಒಲವಿನ ಬಣ್ಣಗಳು ತಲುಪಿರಲು
ಬಾರದ ಲೋಕವ,
ನೆನಪುಗಳು ಮುಂದೆ ಬಾಗಿ
ಕನಸುಗಳ ಅಪ್ಪಿಕೊಂಡು,
ಹಸನಾಗಿಸಲು ಹವಣಿಸುತ್ತಿವೆ ಈ ಜೀವವ.
- ಷಾ
Nice✨
ReplyDeleteThank you Madam
DeleteNice lines 👍
ReplyDeleteThank you
Delete👌👌👌
ReplyDeleteThank you
DeleteSuper sir
ReplyDeleteThank you
DeleteNice
ReplyDelete